ಹತ್ತು ಸಾವಿರ ಗಡಿ ದಾಟಿದ ಅರೇಬಿಕಾ ಪಾರ್ಚ್‌ಮೆಂಟ್ ಕಾಫಿ : 8 ವರ್ಷದಲ್ಲಿ ಇದು ದಾಖಲೆಯ ಏರಿಕೆ !

ಅರೇಬಿಕಾ ಪಾರ್ಚ್‌ಮೆಂಟ್ ಕಾಫಿಯ ಮಾರುಕಟ್ಟೆ ದರ 50 ಕಿ.ಗ್ರಾಂ ಚೀಲಕ್ಕೆ  ಹತ್ತು ಸಾವಿರ ದಾಖಲೆಯ ದರವನ್ನು ತಲುಪಿರುವುದರಿಂದ ಕಾಫಿ ಬೆಳೆಗಾರರು ಸಂತೋಷಗೊಂಡಿದ್ದಾರೆ. ಈ  ದರ ಕಳೆದ ಎಂಟು ವರ್ಷಗಳಲ್ಲಿ ಅತಿ ಹೆಚ್ಚು.

ಬುಧವಾರ ಚಿಕ್ಕಮಗಳೂರು,ಕೊಡಗಿನ  ಪ್ರಮುಖ ಮಾರುಕಟ್ಟೆಯಲ್ಲಿ ಅರೇಬಿಕಾ ಪಾರ್ಚ್‌ಮೆಂಟ್ ಕಾಫಿ ಧಾರಣೆ  10,400 ರಿಂದ 10,500 ರೂ.ವರೆಗೆ ಇತ್ತು. ಇದು ಮಾರಾಟಗಾರರ ಪ್ರಕಾರ, ಅರೇಬಿಕಾ ಪಾರ್ಚ್‌ಮೆಂಟ್‌ಗೆ ಅತಿ ಹೆಚ್ಚು ದರವಾಗಿದೆ.

ಕಾರ್ಮಿಕರ ಕೊರತೆ ಮತ್ತು ತೋಟದ ಇತರ ಸಮಸ್ಯೆಯ ಹೊರತಾಗಿಯೂ  ಕೊಡಗು, ಚಿಕ್ಕಮಗಳೂರು  ಮತ್ತು ಹಾಸನಗಳಲ್ಲಿನ ಬೆಳೆಗಾರರು ಕಾಫಿಯ ಈ ದಾಖಲೆ ದರದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಅರೇಬಿಕಾ ಕಾಫಿ ಕೊನೆಯ ಬಾರಿಗೆ ಗರಿಷ್ಠ ದರವನ್ನು ತಲುಪಿದ್ದು 2014 ರಲ್ಲಿ. ಆಗ ಅದು ಪ್ರತಿ ಚೀಲಕ್ಕೆ 9,600 ರಿಂದ 9,800 ರೂ. ನಂತರ ಬೆಲೆ ಕೆಳಮುಖವಾಗಿ ಸಾಗಿ 6,000 ರೂಗಳನ್ನು ಮುಟ್ಟಿತ್ತು. ರೋಬಸ್ಟಾ ಪಾರ್ಚ್‌ಮೆಂಟ್ ಬೆಲೆಯೂ ಪ್ರತಿ ಚೀಲಕ್ಕೆ 7,000 ರೂ.ಗೆ ಏರಿದೆ.

Also read  ಕಾಫಿ ತೋಟಕ್ಕೆ ಬೆಳ್ಳಿ ತೋರಣದ ಅಲಂಕಾರ!

ಜಗತ್ತಿನ ದೊಡ್ಡ ಅರೇಬಿಕಾ ಕಾಫಿ ಉತ್ಪದನಾ ದೇಶವಾದ ಬ್ರೆಜಿಲ್ ಮತ್ತು ಕೊಲಂಬಿಯಾದ ಉತ್ಪಾದನೆಯಲ್ಲಿ ಈ ಬಾರಿ ಗಮನಾರ್ಹ ಇಳಿಕೆ ಕಂಡುಬಂದ ಕಾರಣ  ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಹೆಚ್ಚಿನ ಬೇಡಿಕೆಯಿಂದಾಗಿ ಕಾಫಿ ದರದಲ್ಲಿ ಹೆಚ್ಚಳ ಕಂಡುಬಂದಿದೆ.
ಈ ವರ್ಷದ ಮಳೆಗಾಲದಲ್ಲಿ ಪ್ರವಾಹದಿಂದಾಗಿ ಚಿಕ್ಕಮಗಳೂರು ,ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಕಾಫಿ ಉತ್ಪಾದನೆಯಲ್ಲಿ ಕುಸಿತ ಕಂಡುಬಂದಿದೆ. ಇದು ಕೂಡ ಕಾಫಿ ಬೇಡಿಕೆಯ ಹೆಚ್ಚಳವನ್ನು ಸೃಷ್ಟಿಸಿದೆ.

ಮಾರುಕಟ್ಟೆ ದರಗಳು ಹೆಚ್ಚಾಗಿದ್ದರೂ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಾಫಿ ಉತ್ಪಾದನೆಯ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿದೆ. ಈ ಹಿಂದೆ 50 ಚೀಲ ಕಾಫಿ ಬೆಳೆದ ಬೆಳೆಗಾರರು ಕೇವಲ 10 ಚೀಲ ಕಾಫಿ ಕುಯಿಲು ಮಾಡಿದ್ದಾರೆ. 

ಜನವರಿಯಲ್ಲಿ  ಕಡಿಮೆ ದರದಲ್ಲಿ ಕಾಫಿ ಮಾರಾಟ ಮಾಡಿರುವ ಬೆಳೆಗಾರರು ತಮ್ಮ ನಿರ್ಧಾರದಿಂದ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ.ಆದರೆ ಕಾಫಿ ದಾಸ್ತಾನು ಮಾಡಿದ ಬೆಳೆಗಾರರು ಅದನ್ನು ಕ್ಯೂರಿಂಗ್ ಕೇಂದ್ರಗಳಲ್ಲಿ ಈಗ ಮಾರಾಟ ಮಾಡುತ್ತಿದ್ದಾರೆ. 

ಸುಮಾರು 60% ಕಾಫಿ ಬೆಳೆಗಾರರು ತಮ್ಮ ಕಾಫಿಯನ್ನು ಈಗಾಗಲೇ ಮಾರಾಟ ಮಾಡಿದ್ದಾರೆ . ಮಾರಾಟ ಮಾಡದೇ ಕಾಫಿ ದಾಸ್ತಾನು ಇಟ್ಟುಕೊಂಡ ಬೆಳೆಗಾರರು ಈ  ಲಾಭವನ್ನು ಪಡೆದುಕೊಳ್ಳಬಹುದು.

Also read  ಬೆಳ್ಳುಳ್ಳಿ ಹಾಗೂ ಸಾಬೂನು ಮಿಶ್ರಣದಿಂದ ಕೀಟನಾಶಕ ತಯಾರಿಸುವ ವಿಧಾನ ಹಾಗೂ ಬಳಕೆ ಹೇಗೆ?

Leave a Reply