Black pepperFeatured News

ಕರಿಮೆಣಸಿನ ಕೃಷಿಯಲ್ಲಿ ವೈಜ್ಞಾನಿಕ ತಂತ್ರಜ್ಞಾನ ಅಳವಡಿಕೆ

ಕಪ್ಪು ಚಿನ್ನದ ಖ್ಯಾತಿಯ ಕರಿಮೆಣಸು ವಿಶೇಷವಾಗಿ ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳಲ್ಲಿ ಬೆಳೆಯುವ ಪ್ರಮುಖ ವಾಣಿಜ್ಯ ಬೆಳೆ. ಹೆಚ್ಚಿನ ಇಳುವರಿ ಪಡೆಯಲು ಕರಿಮೆಣಸು ಬೆಳೆಯ ಕಾಳಜಿ ಮತ್ತು ತಾಂತ್ರಿಕ ನಿರ್ವಹಣೆ ಮುಖ್ಯ.

ಹವಾಮಾನ ಮತ್ತು ಉತ್ತಮ ತಳಿಗಳ ಜತೆಗೆ ಕರಿಮೆಣಸಿನ ಉತ್ಪಾದನೆ ಬೆಳೆ ರಕ್ಷಣೆ ಕಾರ್ಯತಂತ್ರಗಳಿಂದ ಹೆಚ್ಚು ಪ್ರಭಾವಿತವಾಗುತ್ತದೆ.ಉತ್ತಮ ಕೃಷಿ ಪದ್ಧತಿ ಮತ್ತು ಬೆಳೆಯ ಆರೈಕೆ ಅವಲಂಬಿಸಿ ಬೆಳೆ ಮತ್ತು ಅದರ ಪರಿಸರವನ್ನು ಅರ್ಥೈಸಿಕೊಂಡರೆ ರೈತರಿಗೆ ಬಂಪರ್‌ ಇಳುವರಿ ಮತ್ತು ಆರ್ಥಿಕ ಸ್ಥಿರತೆ ಸಿಗುತ್ತದೆ.

ಕೊತ್ತು ಉದುರುವಿಕೆ:

ಮಾರ್ಚ್‌ -ಏಪ್ರಿಲ್‌ ತಿಂಗಳಿನಲ್ಲಿ ಮರದ ನೆರಳಿನ ನಿಯಂತ್ರಣ (ಕಪಾತು) ಮಾಡುವುದರಿಂದ ಆಂಥ್ರಾಕ್ನೋಸ್‌ ರೋಗ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ  ಮತ್ತು ಇದರಿಂದಾಗಿ ಜುಲೈ ತಿಂಗಳ ಮೊದಲೇ ಸಂಪೂರ್ಣ ಬೆಳೆ ಹಾನಿಯಾಗುತ್ತದೆ.

ಕೊತ್ತು ಉದುರುವುದನ್ನು ತಡೆಗಟ್ಟಲು ಮರದ ನೆರಳಿನ ನಿಯಂತ್ರಣವನ್ನು (ಕಪಾತು) ಜನವರಿ ತಿಂಗಳ ಮೊದಲೆ ಮಾಡಿ. ಜತೆಗೆ 10 ದಿನಗಳ ಅಂತರದಲ್ಲಿ ಪ್ರತಿ ಬಳ್ಳಿಗೆ 50-80 ಲೀಟರಿನಷ್ಟು ನೀರು ಕೊಡಲಾರಂಭಿಸಿ .ಇದರಿಂದಾಗಿ ಜೂನ್‌ ತಿಂಗಳಿನಲ್ಲಿ ಹೂವು ಬಿಡುವಿಕೆ ಪ್ರಾರಂಭವಾಗಿ ,ಜುಲೈನಲ್ಲಿ ಹದಿನೈದು ದಿನಗಳಲ್ಲಿ ಶೇ.80 ರಷ್ಟು ಕಾಯಿಯಾಗುತದೆ . ಮೊದಲಿನಂತೆ ಹೊಸ ಎಲೆ ಮತ್ತು ಹೂವಿನ ಉತ್ಪಾದನೆಯು ಆಗಸ್ಟ್‌-ಸೆಪ್ಟೆಂಬರ್‌ ತಿಂಗಳಿನಲ್ಲಿ ಕಂಡು ಬರುವುದಿಲ್ಲ .

ಗೊಬ್ಬರ ನಿರ್ವಹಣೆಯ ಕ್ರಮ:

ಮೇ ತಿಂಗಳಿನಲ್ಲಿ 100 ಗ್ರಾಂ ಯೂರಿಯಾ + 50 ಗ್ರಾಂ ಡೈ ಅಮೋನಿಯಂ ಫಾಸ್ಪೇಟ್‌ + 150 ಗ್ರಾಂ ಮ್ಯೂರಿಯೇಟ್‌ ಆಫ್‌ ಪೊಟ್ಯಾಷ್‌ ಹಾಗೂ ಐ.ಐ.ಎಸ್‌.ಆರ್‌. ಪೆಪ್ಪರ್‌ ಸ್ಪೆಷಲ್‌ ಸ್ಪ್ರೇ ಮಾಡುತ್ತಾರೆ. (1 ಕೆ. ಜಿ. ಐ.ಐ.ಎಸ್‌.ಆರ್‌. ಪೆಪ್ಪರ್‌ ಸ್ಪೆಷಲ್‌ + 1 ಕೆಜಿ 19:19:19 ಇವುಗಳನ್ನು 200 ಲೀ. ನೀರಿನಲ್ಲಿ ಸೇರಿಸುತ್ತಾರೆ).

ಅಕ್ಟೋಬರ್‌ ತಿಂಗಳಿನಲ್ಲಿ ಪ್ರತಿ ಬಳ್ಳಿಗೆ 1 ಬುಟ್ಟಿ (ಸುಮಾರು 10 ಕೆ ಜಿ) ಕಾಂಪೋಸ್ಟ್‌ ಹಾಕಿ ಬುಡಕ್ಕೆ ಮಣ್ಣು ಸೇರಿಸಿ ಮುಚ್ಚಿ .

ಶೀಘ್ರ ಸೊರಗು ರೋಗ, ನಿಧಾನ ಸೊರಗು ರೋಗ ಮತ್ತು ಎಲೆ ಚುಕ್ಕಿ ರೋಗಗಳ ಹತೋಟಿಗೆ ವರ್ಷಕ್ಕೆ ಎರಡು ಬಾರಿ ಜೂನ್‌ ಮತ್ತು ಆಗಸ್ಟ್‌ / ಸೆಪ್ಟೆಂಬರ್‌ ತಿಂಗಳಿನಲ್ಲಿ ಶೇ. 1 ಬೋರ್ಡೆಕ್ಸ್‌ ಮಿಶ್ರಣ ಸಿಂಪಡಿಸಿ .

ಜೂನ್‌ ತಿಂಗಳಿನಲ್ಲಿ ತಾಮ್ರದ ಆಕ್ಸಿಕ್ಲೋರೈಡ್‌ (ಶೇ.0.2) ಅನ್ನು ಬಳ್ಳಿಯ ಬುಡಕ್ಕೆ ಸುರಿಯುವುದನ್ನು ಮರೆಯದೇ ಮಾಡಿ .

ಇತರ ಕೀಟ ಮತ್ತು ರೋಗಗಳ ನಿರ್ವಹಣೆಗೆ ವಿಜ್ಞಾನಿಗಳ ಸಲಹೆಯ ಮೇರೆಗೆ ಹತೋಟಿ ಕ್ರಮಗಳನ್ನು ಕೈಗೊ.ಸರಿಯಾದ ಸಮಯದಲ್ಲಿ ವೈಜ್ಞಾನಿಕ ತಂತ್ರಜ್ಞಾನ ಅಳವಡಿಕೆಯಿಂದ ಅವರು ನೆಮ್ಮದಿ ಕಂಡುಕೊಳ್ಳಿ .

Also read  ಜೀರಿಗೆ ಮೆಣಸು - ಈ ಛೋಟ್ ಮೆಣಸಿನಕಾಯಿ ಬಲು ಕಾರ

Leave a Reply