CoffeeFeatured News

ಮುಂಗಾರು ಮುಂಚಿನ ಗೊಬ್ಬರ ಹಾಕುವಿಕೆ

ಕಾಫಿ ಹಣ್ಣು ಕೊಯ್ದು, ಗಿಡಗಸಿ ಮಾಡಿದಾಗ ಗಿಡಗಳು ಬಹಳ ದುರ್ಬಲಾವಸ್ಥೆಯಲ್ಲಿರುತ್ತವೆ.ಬೇಸಿಗೆ ಮಳೆ ಬಿದ್ದ ನಂತರ ಕಾಫಿ ಗಿಡಗಳಲ್ಲಿ ಹೆಚ್ಚಿನ ಚಟುವಟಿಕೆಗಳು ಕಂಡು ಬಂದು, ಹೊಸ ಚಿಗುರುಗಳು ಬಡಲು ಪ್ರಾರಂಭ ಆಗುತ್ತದೆ.ಇಂತಹ ಸಂದರ್ಭದಲ್ಲಿ ಗಿಡಗಳಿಗೆ ಅವಶ್ಯಕವಾದ ಪೋಷಕಾ೦ಶಗಳನ್ನೊಳಗೊಂಡ ರಾಸಾಯನಿಕ ಗೊಬ್ಬರಗಳನ್ನು ಮಣ್ಣಿನ ಮೂಲಕ ಕೊಡಬೇಕು.

ಪ್ರತಿ ತೋಟದಲ್ಲಿ ಬೆಳೆದುನಿಂತ ಕಾಫಿ ಗಿಡಗಳಿಗೆ, ಅವುಗಳ ಬೆಳವಣಿಗೆಗಾಗಿ ಕಡ್ಡಾಯವಾಗಿ ಹೆಕ್ಟೇರ್‌ ಒಂದಕ್ಕೆ 50:50:೫0 ಕಿಗ್ರಾಂಗಳಷ್ಟು ಸಾರಜನಕ, ರಂಜಕ ಮತ್ತು ಪೋಟಾಶ್‌ ಅಂಶಗಳ ಅವಶ್ಯಕತೆ ಇರುತ್ತದೆ. ಇಷ್ಟು ಪ್ರಮಾಣದಲ್ಲಿ ಪ್ರತಿ ತೋಟಗಳಿಗೆ ಕಡ್ಡಾಯವಾಗಿ ಗೊಬ್ಬರವನ್ನು ಕೊಡಬೇಕಾಗುತ್ತದೆ.ಈ ರೀತಿ ಕೊಟ್ಟ ಗೊಬ್ಬರದ ಪ್ರಮಾಣವು,ಕಾಫಿ ಗಿಡದಲ್ಲಿರುವ ಫಸಲಿನ ಮೇಲೆ ಆಧಾರಿತವಾಗಿಲ್ಲ. ಹೀಗೆ ಕೊಟ್ಟ ಗೊಬ್ಬರದ ಅಂಶವನ್ನು ನಾವು ಸಸ್ಪೆನೆನ್ಸ್‌ (ಸುಸ್ಥಿರ) ಡೋಸ್‌ ಎಂದು ಕರೆಯುತ್ತೇವೆ. ಈ ಗೊಬ್ಬರದ ಅಂಶ ಗಿಡಗಳ ಬೇರು, ರೆಂಬೆ, ಕಾ೦ಡ ಹಾಗೂ ಎಲೆಗಳ ಬೆಳವಣಿಗೆಗೆ ಅತ್ಯಾವಶ್ಯಕ.

ಕಾಫಿ ಗಿಡಗಳಿಗೆ ಒಂದು ವರುಷಕ್ಕೆ ಬೇಕಾದ ಗೊಬ್ಬರದ ಪ್ರಮಾಣವನ್ನು ಮಣ್ಣು ಪರೀಕ್ಷೆ ಮಾಡಿ, ಮಣ್ಣಿನ ಫಲವತ್ತತೆ ಮತ್ತು ಫಸಲಿನ ಆಧಾರದ ಮೇಲೆ ನಿಗಧಿ ಮಾಡಲಾಗುತ್ತದೆ. ಈ ರೀತಿ ನಿಗಧಿ ಮಾಡಿದ ಗೊಬ್ಬರದ ಪ್ರಮಾಣವನ್ನು ಒಂದು ವರ್ಷದಲ್ಲಿ ಎರಡು ಅಥವಾ ಮೂರು ಕಂತುಗಳಲ್ಲಿ ಕಾಫಿ ತೋಟಗಳಿಗೆ ಕೊಡಬೇಕು. ಸಾಮಾನ್ಯವಾಗಿ ಹೂಮಳೆ ಮುಂಚೆ(ಮಾರ್ಚ್‌), ಮುಂಗಾರು ಮಳೆ ಮುಂಚೆ (ಮೇ) ಮತ್ತು ಮುಂಗಾರು ಮಳೆ ನಂತರದ (ಸೆಪೆಂಬರ್‌) ಸಮಯದಲ್ಲಿ ಈ (ಮಾರ್ಚ್‌), ಮುಂಗಾರು ಮಳೆ ಮುಂಚೆ (ಮೇ) ಮತ್ತು ಮುಂಗಾರು ಮಳೆ ನಂತರದ (ಸೆಪ್ಟೆಂಬರ್‌) ಸಮಯದಲ್ಲಿ ಈ ಗೊಬ್ಬರವನ್ನು ಕಾಫಿ ತೋಟಗಳಲ್ಲಿ ಕೊಡಲು ಶಿಫಾರಸು ಮಾಡಲಾಗಿದೆ. ಬಳಸಬೇಕಾದ ಗೊಬ್ಬರದ ಪ್ರಮಾಣವು ಹಿಂದಿನ ಸಾರಿ ಹಾಕಿದ ಗೊಬ್ಬರ, ಕಾಫಿ ಗಿಡಗಳ ವಯಸ್ಸು, ಆರೋಗ್ಯ, ಮಣ್ಣಿನ ಫಲವತ್ತತೆ, ಮತ್ತು ಹಿಂದಿನ ಐದು ಸಾಲಿನಲ್ಲಿ ಪಡೆದ ಫಸಲು (ಸರಾಸರಿ) ಆಧಾರಿತವಾಗಿದೆ.


ಮುಂಗಾರು ಮುಂಚಿನ ಗೊಬ್ಬರವನ್ನು ಹಾಕುವ ಮೊದಲು ಬೆಳೆಗಾರರು ಕೆಲವು ಸಿದ್ಧತಾಕ್ರಮಗಳನ್ನು ಕೈಗೊಳ್ಳಬೇಕು. ಅವುಗಳೆಂದರೆ ತೋಟಗಳಲ್ಲಿನ ಕಳೆ ತೆಗೆಯಬೇಕು, ಗಿಡಗಳಲ್ಲಿ ಅನಪೇಕ್ಷಿತ ಮತ್ತು ಅನುತ್ಪಾಧಕ ಬೆಳವಣಿಗೆಯನ್ನು ತೆಗೆದು ಹಾಕಬೇಕು (ಗಿಡಕಸಿ) ಮತ್ತು ತೋಟದಲ್ಲಿ ಸಾಕಷ್ಟು ತೇವಾಂಶವನ್ನು ಹದವಾದ ನೆರಳಿನ ವ್ಯವಸ್ಥೆ ಮಾಡಿ ಹಿಡಿದಿಟ್ಟುಕೊಳ್ಳಬೇಕು. ಗೊಬ್ಬರವನ್ನು ಬೆರೆಸುವ ಮುಂಚಿತವಾಗಿ, ತೋಟದ ವಿಸ್ತೀರ್ಣ, ತೋಟಕ್ಕೆ ಶಿಫಾರಸು ಮಾಡಿರುವ ಗೊಬ್ಬರದ ಪ್ರಮಾಣವನ್ನು ಮನಸ್ಸಿನಲ್ಲಿಟ್ಟು ಕೊಂಡು, ಅಪೇಕ್ಷಿತ ಗೊಬ್ಬರವನ್ನು ಯಥೋಚಿತ ಪ್ರಮಾಣದಲ್ಲಿ ಬೆರೆಸಿ ಮಿಶ್ರಣ ಮಾಡಿಕೊಳ್ಳಬೇಕು. ಗೊಬ್ಬರ ಹಾಕುವ ಕಾರ್ಮಿಕರಿಗೆ ಲೆಕ್ಕ ಹಾಕಿದ ಪ್ರಮಾಣದಲ್ಲಿ ಸರಿಯಾದ ವಿಧಾನದಲ್ಲಿ ಹಾಕುವಂತೆ ಸೂಚಿಸಬೇಕು. ಕಾಫಿಯಲ್ಲಿ ಗೊಬ್ಬರ ಹಾಕಬೇಕಾದರೆ, ಗಿಡದ ಬುಡದಿಂದ ರೆಂಬೆ ಬೆಳೆದಿರುವ ವರ್ತುಲಾಕಾರದ ಜಾಗದವರೆಗೂ ಇರುವ ಕಸ,ಕಡ್ಡಿ ಮತ್ತು ತರಗೆಲೆಗಳನ್ನು ಬದಿಗೆ ಸರಿಸಬೇಕು. ಗಿಡದ ಕಾಂಡದ ಬುಡದಿಂದ ಸುತ್ತ ಒಂದು ಅಡಿ ಬಿಟ್ಟು ಮುಂದಕ್ಕೆ ಮಣ್ಣನ್ನು ಸಣ್ಣದಾಗಿ ಸಡಿಲಿಸಬೇಕು ಮತ್ತು ಗೊಬ್ಬರದ ಅಂಶವನ್ನು ಅದರಲ್ಲಿ ಸುತ್ತ ಹರಡಬೇಕು. ನಂತರ ಮಣ್ಣನ್ನು ತಳಮೇಲು ಮಾಡಿ, ಸರಿಸಿದ ಕಸ,ಕಡ್ಡಿ ಮತ್ತು ತರಗೆಲೆಗಳಿಂದ ಪುನಹ ಮುಚ್ಚಬೇಕು.ಯಾವುದೇ ಕಾರಣಕ್ಕೂ ಒಂದು ಹೆಕ್ಟರ್‌ಗೆ 100 :75 :100 ಕಿಲೋ NPK ಗಿಂತ ಹೆಚ್ಚಿನ ಗೊಬ್ಬರವನ್ನು ಒಂದೇ ಕಂತಿನಲ್ಲಿ ಕೊಡಬಾರದು. ಹೀಗೆ ಒಂದೇ ಸಲ ಹೆಚ್ಚಾಗಿ ಗೊಬ್ಬರವನ್ನು ಕೊಡುವುದರಿ೦ದ ಗೊಬ್ಬರದ ಅಂಶ ಬಿಸಿಲಿನ ಶಾಖದಿಂದ ನಷ್ಟ ಹೊಂದುತ್ತವೆ.ಹೆಚ್ಚು ಫಸಲು ಕೊಡುತ್ತಿರುವ ಪಟ್ಟೆಗಳಿಗೆ ಗೊಬ್ಬರ ಹಾಕುವ ಕಂತುಗಳು 3-4 ಕ್ಕಿಂತ ಹೆಚ್ಚಾಗಿರುತ್ತವೆ. ಯಾವುದೇ ಕಾರಣಕ್ಕೂ, ಮುಂಗಾರು ಮಳೆ ಮುಂಚೆ ಕೊಡುವ ಗೊಬ್ಬರದಲ್ಲಿ ರಂಜಕದ ಕಡಿತವನ್ನು ಮಾಡಬಾರದು.ರಂಜಕದ ಅಂಶ ಈ ಕಾಲದಲ್ಲಿ ಕಾಫಿ ಗಿಡಗಳಿಗೆ ಬೇರು ಬೆಳೆಯಲು ಬಹಳ ಅವಶ್ಯಕವಾಗಿರುತ್ತದೆ.

Also read  Drink COFFEE to fight Dementia