ಆಗಸ್ಟ್‌ನಲ್ಲಿ ಶ್ರೀಲಂಕಾ ಮೂಲಕ 700ಟನ್‌ ಕಾಳುಮೆಣಸು ಆಮದು

ಒಂದು ಕಡೆ ನಿರಂತರ ಮಳೆಯಿಂದ ಬೆಳೆ ನಷ್ಟ, ಇನ್ನೊಂದು ಕಡೆ ಸೂಕ್ತ ಬೆಲೆ ಇಲ್ಲದೆ ಕಂಗಾಲಾಗಿರುವ ರಾಜ್ಯದ ಕಾಳುಮೆಣಸು ಬೆಳೆಗಾರರಿಗೆ ಇದೀಗ ಮತ್ತೆ ಹಳೇ ಗುಮ್ಮ ಕಾಡಲು ಶುರುವಾಗಿದೆ. ವಿಯೆಟ್ನಾಂನಿಂದ ಮತ್ತೆ ಕಾಳು ಮೆಣಸು ಆಮದು ಆರಂಭವಾಗಿದೆ. ಆಗಸ್ಟ್‌ ತಿಂಗಳಲ್ಲಿ ಶ್ರೀಲಂಕಾ ಮೂಲಕ ಭಾರತಕ್ಕೆ ಸುಮಾರು 700 ಟನ್‌ಗಳಷ್ಟುಕಾಳುಮೆಣಸು ಆಮದಾಗಿದ್ದು.

ಶ್ರೀಲಂಕಾ-ಭಾರತ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಇದೆ. ಇದನ್ನೇ ಬಂಡವಾಳ ಮಾಡಿಕೊಂಡು ಶ್ರೀಲಂಕಾ ಮೂಲಕ ಭಾರತವನ್ನು ವಿಯೆಟ್ನಾಂನ ಕಳಪೆ ಗುಣಮಟ್ಟದ ಕಾಳುಮೆಣಸು ಪ್ರವೇಶಿಸುತ್ತದೆ. ಅದರಂತೆ ಜೂನ್‌ ಹಾಗೂ ಜುಲೈಯಲ್ಲಿ 100-200 ಟನ್‌, ಆಗಸ್ಟ್‌ ತಿಂಗಳಲ್ಲಿ ಸುಮಾರು 700 ಟನ್‌ಗಳಷ್ಟುಕಾಳುಮೆಣಸನ್ನು ಆಮದು ಮಾಡಿಕೊಳ್ಳಲಾಗಿದೆ.ಸ್ಥಳೀಯ ಬೆಳೆಗಾರರ ಒತ್ತಡದ ಹಿನ್ನೆಲೆಯಲ್ಲಿ ಐದಾರು ತಿಂಗಳ ಹಿಂದೆ ವಿಯೆಟ್ನಾಂನಿಂದ ಆಮದಾಗುವ ಕಾಳುಮೆಣಸಿಗೆ ಕಡಿವಾಣ ಹಾಕಲಾಗಿತ್ತು. ಆದರೆ ಇದೀಗ ಮತ್ತೆ ಆಮದು ಆರಂಭವಾಗಿದೆ.

ವಿಯೆಟ್ನಾಂ ಕಾಳುಮೆಣಸು ಆಮದು ಮಾಡಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ.ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

Also read  Top 10 rainiest places in India on Tuesday

ವಿಯೆಟ್ನಾಂನಿಂದ ಕಾಳುಮೆಣಸು ಆಮದು ಸ್ಥಗಿತಕ್ಕೆ ಸುಮಾರು 17 ಬೆಳೆಗಾರರ ಸಂಘಟನೆಗಳು ಒಂದಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಜಾರಿ ನಿರ್ದೇಶನಾಲಯ(ಇ.ಡಿ.)ಗೂ ದೂರು ನೀಡಲಾಗಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬೆಳೆಗಾರರ ಒಕ್ಕೂಟದ ಪ್ರಮುಖರು ಬೇಸರ ವ್ಯಕ್ತಪಡಿಸುತ್ತಾರೆ.

ಶ್ರೀಲಂಕಾ ಮೂಲಕ ಭಾರತಕ್ಕೆ ವಿಯೆಟ್ನಾಂನಿಂದ ನಿಯಮಬಾಹಿರವಾಗಿ ಕಾಳುಮೆಣಸು ಆಮದು ಮಾಡಲಾಗುತ್ತಿದೆ. ಆಗಸ್ಟ್‌ನಲ್ಲಿ ಸುಮಾರು 700 ಟನ್‌ಗಳಷ್ಟುಮೆಣಸನ್ನು ಆಮದು ಮಾಡಿಕೊಳ್ಳಲಾಗಿದೆ. ಇದರಿಂದ ದೇಶೀ ಬೆಳೆಗಾರರಿಗೆ ತೊಂದರೆಯಾಗುತ್ತದೆ. ಈ ವಿಚಾರವಾಗಿ ಈ ಹಿಂದೆ ವಾಣಿಜ್ಯ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ.

-ಕೆ.ಕೆ. ವಿಶ್ವನಾಥ್‌, ಸಂಚಾಲಕರು, ಕಾಳುಮೆಣಸು ಬೆಳೆಗಾರರ ಒಕ್ಕೂಟದ ಸಮನ್ವಯ ಸಮಿತಿ.

ಇದರಿಂದ ಬೆಳೆಗಾರರಿಗೆ ನಷ್ಟವಾಗುತ್ತಿದ್ದು ಕಳ್ಳ ವ್ಯಾಪಾರಿಗಳು ಲಾಭ ಮಾಡಿಕೊಳ್ಳುತ್ತಿದ್ದಾರೆ. ವಿಯೆಟ್ನಾಂ ಕಾಳುಮೆಣಸಿನಲ್ಲಿ ಎಣ್ಣೆ ಅಂಶ ತೆಗೆದು ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಾರ ಮಂಡಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

-ಪ್ರದೀಪ್‌ ಪೂವಯ್ಯ, ತಾಂತ್ರಿಕ ಸದಸ್ಯರು ಕಾಳುಮೆಣಸು ಬೆಳೆಗಾರರ ಒಕ್ಕೂಟದ ಸಮನ್ವಯ ಸಮಿತಿ.

source:kannada.asianetnews.com

Also read  Hemavathi reservoir at Gorur is full,six crest gates opened